ಕೆಪ್
ಕೂಪಗಳಲ್ಲಿ ಗೊತ್ತಾದ ಅಂತರದಲ್ಲಿ ಪಂಜರವನ್ನು (ಕೇಜ್) ತಡೆ ಹಿಡಿದು ನಿಲ್ಲಿಸುವ ಸಾಧನ. ಗಣಿಕಾಯಿದೆ ಪ್ರಕಾರ, ಚಲಿಸುವ ಪಂಜರಗಳಿರುವ ಎಲ್ಲ ಕೂಪಗಳಲ್ಲಿಯೂ, ಕೆಪ್ ಸಾಧನವನ್ನು ಅಳವಡಿಸಬೇಕು. ಗಣಿ ಮಟ್ಟಗಳಲ್ಲಿ (ಮೈನ್ ಲೆವೆಲ್ಸ್) ಪಂಜರ ಪೂರ್ಣವಾಗಿ ಕೆಪ್‍ಗಳ ಮೇಲೆ ಕೂರುವುದರಿಂದ ಉಕ್ಕಿನ ಹಗ್ಗದ ಮೇಲೆ ಇಲ್ಲವೆ ವರ್ತುಲ ಯಂತ್ರದ ಮೇಲೆ ತೂಕ ಬೀಳುವುದಿಲ್ಲ. ಇದರಿಂದ ಯಾವ ಆತಂಕವಿಲ್ಲದೆ ಪಂಜರಕ್ಕೆ ಹೊರೆ ತುಂಬುವುದು ಅಥವಾ ಅದರಿಂದ ಹೊರೆ ತೆಗೆಯುವುದು ಸುಲಭಸಾಧ್ಯವಾಗುತ್ತದೆ.                                                              
     (ಟಿ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ